Notifications

‘ಅಸ್ಮಿತೆ’ ಮತ್ತು ‘ಪೂರ್ವ ಪಶ್ಚಿಮ ಅನುಸಂಧಾನ’ ಕೃತಿಗಳ ಬಿಡುಗಡೆ ಸಮಾರಂಭ

ಮಾನ್ಯರೆ, ತೇಜಸ್ ಇಂಡಿಯಾ, ಬೆಂಗಳೂರು ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು ಹಾಗೂ ಧಾರವಾಡ ಕಟ್ಟೆ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಪ್ರೊ. ಬಸವರಾಜ ಡೋಣೂರ ಅವರ ಜನ್ಮದಿನದಂದೇ ಅವರ ‘ಅಸ್ಮಿತೆ’ ಮತ್ತು ‘ಪೂರ್ವ ಪಶ್ಚಿಮ ಅನುಸಂಧಾನ’ ಕೃತಿಗಳ ಬಿಡುಗಡೆ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯರು, ಆತ್ಮೀಯರು ಹಾಗೂ ಧಾರವಾಡ ಕಟ್ಟೆ ಬಲಗದವರೆಲ್ಲರು ಈ ಕಾರ್ಯಕ್ರಮದಲ್ಲಿ ನಮ್ಮ ಜೊತೆಯಗಬೇಕೆಂದು ಸವಿನಯ ಮನವಿ ಹಾಗೂ ಆತ್ಮೀಯ ಸ್ವಾಗತ. ದಿನಾಂಕ: 26-07-2025 ಸಮಯ: ಸಂಜೆ 5.30 ಕ್ಕೆ ಸ್ಥಳ: ಬೇಂದ್ರೆ ಭವನ, ಸಪ್ತಾಪುರ, ಧಾರವಾಡ […]

‘ಅಸ್ಮಿತೆ’ ಮತ್ತು ‘ಪೂರ್ವ ಪಶ್ಚಿಮ ಅನುಸಂಧಾನ’ ಕೃತಿಗಳ ಬಿಡುಗಡೆ ಸಮಾರಂಭ Read More »

ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ

ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ ಧಾರವಾಡ ಕಟ್ಟೆ ಈವರೆಗೆ ಅನೇಕ ಉಪನ್ಯಾಸ ಮಾಲಿಕೆಗಳನ್ನು ಆಯೋಜನೆ ಮಾಡಿದೆ. ಕಟ್ಟೆಯ ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇಶ ವಿದೇಶಗಳ ಸಾಹಿತ್ಯಾಸಕ್ತರು ಆಲಿಸುತ್ತ ಕಟ್ಟೆಯ ರಚನಾತ್ಮಕ ಕೆಲಸಗಳನ್ನು ಮೆಚ್ಚಿ ಧಾರವಾಡ ಕಟ್ಟೆಯನ್ನು ‘ಸಾಹಿತ್ಯದ ಅನುಭವ ಮಂಟಪ’ ಎಂದು ಕರೆದಿದ್ದಾರೆ. ಶ್ರೋತೃಗಳ ಅಪೇಕ್ಷೆಯಂತೆ ವಿಶ್ವಮಾನ್ಯ ಮಹಾನ್ ನಾಟಕಕಾರ ಶೇಕ್ಸ್‌ಪಿಯರನ 37 ನಾಟಕಗಳ ಕುರಿತು ವಿಶೇಷ ಉಪನ್ಯಾಸ ಸರಣಿಯನ್ನು ಅಯೋಜಿಸುತ್ತಿದೆ. 150 ಜನರಿಗೆ ಮಾತ್ರ ಈ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು, ಈ ಆಮಂತ್ರಣ

ಶೇಕ್ಸ್‌ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ Read More »

ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧

ಧಾರವಾಡ ಕಟ್ಟೆ(ರಿ), ಧಾರವಾಡ ಧಾರವಾಡ ಕಟ್ಟೆ ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧ ಎಂಬ ವಿಶೇಷ ಮಾಲಿಕೆಯನ್ನು ಆಯೋಜಿಸಿದೆ. ಜುಲೈ, 2024 ರಿಂದ ಡಿಸೆಂಬರ್, 2024ರವರೆಗೆ ಆರು ತಿಂಗಳ ಕಾಲ ನಿರಂತರವಾಗಿ ಈ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 26 ಜನ ವಿದ್ವಾಂಸರು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ. ಮಾಲಿಕೆಯ ಉಪನ್ಯಾಸಗಳಲ್ಲಿ ಭಾಗವಹಿಸಲು ಈ ಕೆಳಗೆ ನೀಡಲಾದ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಲು ಕೋರಿಕೆ. ಎಲ್ಲಾ ಉಪನ್ಯಾಸಗಳಿಗೆ ಹಾಜರಾಗುವ ಆಸಕ್ತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. Click Here To Register

ಇಂಗ್ಲಿಷ್ ಸಾಹಿತ್ಯ ದರ್ಶನ- ಭಾಗ-೧ Read More »

ಪ್ರಕಟಣೆ

ಪರುಷಕಟ್ಟೆ ಪತ್ರಿಕೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಮುದಾಯ, ಮಾನವಶಾಸ್ತ್ರ, ಮನಃಶಾಸ್ತ್ರ, ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರದ ಕುರಿತು ಲೇಖನಗಳನ್ನು ಪ್ರಕಟಿಸಲಿದೆ. ನಾಡು ನುಡಿಯ ಪರವಾದ, ದೇಶಪ್ರೇಮ, ದೇಶಭಕ್ತಿ, ಚರಿತ್ರೆ, ಪರಂಪರೆ ಮತ್ತು ಸಂಸ್ಕೃತಿಯ ಕುರಿತಾದ ಲೇಖನಗಳಿಗೆ ಅವಕಾಶವಿದೆ. ಲೇಖಕರ ಕಥೆ( ೬ ಪುಟ) ಕವನ (೪ ಕವನ, ಒಂದು ಬಾರಿಗೆ, ಲಲಿತ ಪ್ರಬಂಧ (೬ ಪುಟ) , ಸಂದರ್ಶನ (೮ ಪುಟ) ಮತ್ತು ಪುಸ್ತಕ ವಿಮರ್ಶೆಕ್ಕೂ ಇಲ್ಲಿ ಅವಕಾಶವಿದೆ. ಲೇಖಕರು ತಮ್ಮ ಬರಹವನ್ನು ಈ ಕೆಳಗಿನ ವಿಳಾಸಕ್ಕೆ

ಪ್ರಕಟಣೆ Read More »

ಗೌರವ ಸಂಪಾದಕೀಯ

ಬರಹ ತನ್ನ ಅರ್ಥ, ಸೊಬಗು ಕಳೆದುಕೊಂಡ ಸಂದರ್ಭದಲ್ಲಿ ನಾವು ಕನ್ನಡ ಮಾಸ ಪತ್ರಿಕೆ ಹೊರತರುತ್ತಿದ್ದೇವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಯುಗಪ್ರವರ್ತಕ ಪಲ್ಲಟ ತರುತ್ತೇವೆ ಎಂಬ ಅಸಿಮಿತ ಮಹತ್ವಾಕಾಂಕ್ಷೆ ನಮಗಿಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಾಕ್ರಮದ ದಿಕ್ಕು ಬದಲಿಸುವ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಇಡುವ ಪ್ರಯತ್ನ ನಮ್ಮದು. ಏಕೆ ಬರಹ ತನ್ನ ಅರ್ಥ ಮತ್ತು ಸೊಬಗು ಕಳೆದುಕೊಂಡಿದೆ? ಏಕೆ ಬರಹಗಾರರು ಜನರ, ಓದುಗರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ? ಏಕೆ ಬರಹ ಕೇವಲ ಪದಗಳ ಸಂಗ್ರಹವಾಗಿ

ಗೌರವ ಸಂಪಾದಕೀಯ Read More »

Scroll to Top