ಶೇಕ್ಸ್ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ
ಧಾರವಾಡ ಕಟ್ಟೆ ಈವರೆಗೆ ಅನೇಕ ಉಪನ್ಯಾಸ ಮಾಲಿಕೆಗಳನ್ನು ಆಯೋಜನೆ ಮಾಡಿದೆ. ಕಟ್ಟೆಯ ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇಶ ವಿದೇಶಗಳ ಸಾಹಿತ್ಯಾಸಕ್ತರು ಆಲಿಸುತ್ತ ಕಟ್ಟೆಯ ರಚನಾತ್ಮಕ ಕೆಲಸಗಳನ್ನು ಮೆಚ್ಚಿ ಧಾರವಾಡ ಕಟ್ಟೆಯನ್ನು ‘ಸಾಹಿತ್ಯದ ಅನುಭವ ಮಂಟಪ’ ಎಂದು ಕರೆದಿದ್ದಾರೆ.
ಶ್ರೋತೃಗಳ ಅಪೇಕ್ಷೆಯಂತೆ ವಿಶ್ವಮಾನ್ಯ ಮಹಾನ್ ನಾಟಕಕಾರ ಶೇಕ್ಸ್ಪಿಯರನ 37 ನಾಟಕಗಳ ಕುರಿತು ವಿಶೇಷ ಉಪನ್ಯಾಸ ಸರಣಿಯನ್ನು ಅಯೋಜಿಸುತ್ತಿದೆ.
150 ಜನರಿಗೆ ಮಾತ್ರ ಈ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು, ಈ ಆಮಂತ್ರಣ ಪತ್ರಿಕೆಯೊಂದಿಗೆ ಒದಗಿಸಿದ ಗೂಗಲ್ ಫಾರ್ಮ್ ಬಳಸಿ ನೋಂದಾಯಿಸಿಕೊಳ್ಳಲು ಕೋರಿಕೆ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಡಾ. ವಿಜಯಲಕ್ಷ್ಮಿ ದಾನರಡ್ಡಿ +919743316892
ಶಿವರಾಜ ಸಣಮನಿ +919739741141
ಉದ್ಘಟನಾ ಸಮಾರಂಭ:
ದಿನಾಂಕ: 01-08-2025, ಶುಕ್ರವಾರ
ಸಮಯ: ಸಂಜೆ: 06 ಗಂಟೆಗೆ
ಸ್ಥಳ: ಬೇಂದ್ರೆ ಭವನ, ಸಾಧನಕೇರಿ, ಧಾರವಾಡ
