ವಸುಧೈವ ಕುಟುಂಬಕಂ

ಧಾರವಾಡ ಕಟ್ಟೆ | Dharwad Katte

ಸಾಹಿತ್ಯ ಸಂಸ್ಕೃತಿ ಅನುಸಂಧಾನ

Submit Your Work for Monthly Journal

Join us, this Saturday @ 6 PM

ವಸುಧೈವ ಕುಟುಂಬಕಂ

ಧಾರವಾಡ ಕಟ್ಟೆ | Dharwad Katte

ಸಾಹಿತ್ಯ ಸಂಸ್ಕೃತಿ ಅನುಸಂಧಾನ

ವಸುಧೈವ ಕುಟುಂಬಕಂ

ಧಾರವಾಡ ಕಟ್ಟೆ | Dharwad Katte

ಸಾಹಿತ್ಯ ಸಂಸ್ಕೃತಿ ಅನುಸಂಧಾನ

President’s Desk

English Version

I am very happy to be the President of Dharwad Katte, a literary and cultural forum that came into existence two years ago in Dharwad. It is known as the cultural capital of Karnataka. Initially, the Katte was meant for the teachers, employees and scholars who lived in Dharwad for some years and who left it in search of better jobs/ placements. It provided a platform for the non-resident Dharwadians to come together and share their experiences and thoughts. As days passed by, a lot of people who live in Dharwad and who live in several other parts of the country started showing their keen interest in the literary, cultural activities that the Katte is conducting. In a very short time the Katte became a household name in the state and attracted a good number of viewers from across the country. Eventually, intellectuals and researchers started participating in the seminars, symposiums and lecture series arranged by Katte.

Katte is not affiliated to any particular ideology, belief system or thought process. It keeps its doors open to all ideologies and belief systems. But it will not support the divisive and destructive forces. Katte is committed to nation building and creation of a just and healthy society where every single person lives with self respect.

We initially conducted lectures in Kannada in online mode. Later, we started conducting lectures and seminars in English as well. We received requests from students and teachers of English literature and language, more especially, the young teachers and researchers to arrange lectures, talks, seminars and workshops in English as well. To cater to the genuine needs of the serious students of English literature, we have decided to conduct our programs in Kannada and English. As a first step we are starting one special lecture series in Kannada and one in English. The title of the lecture series in Kannada is ” Makers of Modern World Theatre.” We have invited 24 l writers to speak on 24 playwrights/ stage directors who contributed to the making of Modern World Theatre. Kannada lectures will be arranged on the first two Saturdays of the month. The title of the special series in English is ” Revisiting Shakespeare’s Theatre.” We have invited 40 scholars to speak on all the plays, sonnets and long poems of William Shakespeare.

Katte is bringing a magazine in Kannada.. The title of Kannada monthly online journal is Dharwad Katte Monthly Journal. We will issue a notification inviting stories, poems, essays, book reviews, interviews and research articles from the writers.

Katte proposes to launch two national literary awards very soon. Katte is registered under the Cooperative Societies Act and will receive donations as per the norms.
We welcome comments, suggestions, donations and contributions from the people who trust us and our activities.

Dharwad Katte


With regards,

Mrs. Surekha Donur

Kannada Version

ಧಾರವಾಡ ಕಟ್ಟೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆ. ಸಾಹಿತ್ಯ, ಭಾಷೆ, ಸಂಸ್ಕೃತಿ, ಸಮಾಜ, ನಾಡು-ನುಡಿ ಮತ್ತು ದೇಶದ ಪ್ರಗತಿಗಾಗಿ, ಆರೋಗ್ಯಕ್ಕಾಗಿ, ಸಮೃದ್ಧಿಗಾಗಿ ಶ್ರಮಿಸುವ ಒಂದು ಸ್ವಾಯತ್ತ ಸಂಸ್ಥೆ. ಈ ಸಂಸ್ಥೆ ಕಳೆದ ಎರಡೂವರೆ ವರ್ಷಗಳಿಂದ ಕನ್ನಡದಲ್ಲಿ ನೂರಾರು ಆನ್ಲೈನ್ ಉಪನ್ಯಾಸಗಳನ್ನು, ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಏರ್ಪಡಿಸುತ್ತ ಬಂದಿದೆ. ಇಲ್ಲಿಯವರೆಗೆ ಈ ಸಂಸ್ಥೆ ಯಾರಿಂದಲೂ ಯಾವುದೇ ರೂಪದಲ್ಲಿ ದೇಣಿಗೆಯನ್ನು ಪಡೆದಿಲ್ಲ.

ಧಾರವಾಡ ಕಟ್ಟೆ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜೊತೆಗೆ ಬೇರೆ ರೀತಿಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಇಲ್ಲಿಯವರೆಗೆ ಕಟ್ಟೆಯಿಂದ ಕನ್ನಡದಲ್ಲಿ ಮಾತ್ರ ಉಪನ್ಯಾಸಗಳು, ಕಾರ್ಯಕ್ರಮಗಳು ಜರುಗಿವೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್ ನಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದರ ಜೊತೆಗೆ ಎರಡು ವಾರ್ಷಿಕ ಪ್ರಶಸ್ತಿಗಳನ್ನು ನೀಡುವ ತಿರ್ಮಾನವನ್ನು ಕಟ್ಟೆ ತೆಗೆದುಕೊಂಡಿದೆ. ಈ ಬಗ್ಗೆ ಇಷ್ಟರಲ್ಲಿಯೇ ಪ್ರಕಟಣೆ ಹೊರಬರಲಿದೆ.

ಈಗ ಕಟ್ಟೆ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದೆ. ಕಟ್ಟೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಎರಡು ಆನ್ಲೈನ್ ಮಾಸಿಕಗಳನ್ನು ಶುರುಮಾಡುವ ತೀರ್ಮಾನವನ್ನು ತೆಗೆದುಕೊಂಡಿದೆ. ಇಷ್ಟರಲ್ಲಿಯೇ ಕನ್ನಡ ಆನ್ಲೈನ್ ಮಾಸಪತ್ರಿಕೆ ಪ್ರಾರಂಭವಾಗಲಿದೆ. ಮುಂದಿನ ಎರಡು ದಿನಗಳಲ್ಲಿ ಇಂಗ್ಲಿಷ್ ಪತ್ರಿಕೆಯೂ ಬೆಳಕು ಕಾಣಲಿದೆ. ಪ್ರತಿಯೊಂದು ಪತ್ರಿಕೆಗೂ ಸಂಪಾದನಾ ಮಂಡಳಿ ಇರುತ್ತದೆ, ಸಂಪಾದನ ಮಂಡಳಿಯ.

ಎರಡೂ ಪತ್ರಿಕೆಗಳು ಸಾಹಿತ್ಯದ ಚರ್ಚೆಗೆ, ಹೊಸ ಬರಹಕ್ಕೆ, ಹೊಸ ಆಲೋಚನೆಗಳಿಗೆ ಉತ್ತೇಜನ ನೀಡುತ್ತವೆ. ಧಾರವಾಡ ಕಟ್ಟೆ ಮೂಲಭೂತವಾಗಿ ರಾಜಕೀಯೇತರ ಸಾಹಿತ್ಯಿಕ-ಸಾಂಸ್ಕೃತಿಕ ವೇದಿಕೆ ಆಗಿರುವುದರಿಂದ ಕಟ್ಟೆ ಪ್ರಕಟಿಸಲಿರುವ ಮಾಸಪತ್ರಿಕೆಗಳು ಸ್ವರೂಪದಲ್ಲಿ ರಾಜಕೀಯೇತರವಾಗಿರುತ್ತವೆ. ಯಾವುದೇ ರಾಜಕೀಯ ಪಕ್ಷವನ್ನು ಅಥವಾ ಸರ್ಕಾರವನ್ನು ಬೆಂಬಲಿಸಿ ಬರೆಯುವ ಲೇಖನಗಳಿಗೆ ಇಲ್ಲಿ ಆಸ್ಪದವಿಲ್ಲ. ಯಾವುದೇ ವ್ಯಕ್ತಿ, ಸಮುದಾಯ ಅಥವಾ ಧರ್ಮವನ್ನು ವ್ಯಂಗ್ಯ ಮಾಡಿ, ಲೇವಡಿ ಮಾಡಿ, ಅಪಹಾಸ್ಯ ಮಾಡಿ ಬರೆಯುವ ಲೇಖನಗಳಿಗೂ ಇಲ್ಲಿ ಆಸ್ಪದವಿಲ್ಲ. ಆದರೆ ಪ್ರತಿಯೊಂದು ವಿಷಯದ ಬಗ್ಗೆ ತಾತ್ವಿಕವಾದ, ಸೈದ್ಧಾಂತಿಕವಾದ ಚರ್ಚೆಗೆ ಮುಕ್ತ ಅವಕಾಶವಿದೆ.

ಈ ಪತ್ರಿಕೆ ಯಾವುದೇ ಒಂದು ನಿರ್ದಿಷ್ಟ ಚಿಂತನಾಕ್ರಮವನ್ನು, ವಿಚಾರಕ್ರಮವನ್ನು, ಸಿದ್ಧಾಂತವನ್ನು, ಧಾರ್ಮಿಕ-ಸಾಂಸ್ಕೃತಿಕ ನಂಬಿಕೆಯನ್ನು ಪುಷ್ಟೀಕರಿಸಲು, ಸಮರ್ಥಿಸಲು ಅವಕಾಶ ನೀಡುವುದಿಲ್ಲ. ಈ ಅರ್ಥದಲ್ಲಿ ಧಾರವಾಡ ಕಟ್ಟೆ ಅತ್ಯಂತ ಮುಕ್ತವಾದ ವೇದಿಕೆ. ಇಲ್ಲಿ ಎಲ್ಲರಿಗೂ ಸ್ಥಾನವಿದೆ, ಎಲ್ಲರ ಅಭಿಪ್ರಾಯಕ್ಕೂ ಗೌರವವಿದೆ. ಆದರೆ ಲೇಖಕರ ಯಾವುದೇ ಮಾತಾಗಲಿ ಅಥವಾ ಬರಹವಾಗಲಿ ಬೇರೆ ಸಮುದಾಯಗಳಿಗೆ, ಧರ್ಮೀಯರಿಗೆ, ಜನಾಂಗಗಳಿಗೆ, ಭಾಷಿಕರಿಗೆ ನೋವು ಉಂಟು ಮಾಡುವಂತಿರಬಾರದು. ಹೀಗೆಂದು ಸತ್ಯ ಪ್ರತಿಪಾದನೆಗೆ ವಾಸ್ತವ ಸಂಗತಿಗಳನ್ನು ನಿವೇದಿಸುವವರಿಗೆ ಅವಕಾಶವಿಲ್ಲವೆಂದು ಭಾವಿಸುವಂತಿಲ್ಲ. ಸಮಾಜದ ಒಟ್ಟು ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಖರವಾದ ಆಧಾರವನ್ನು ಇಟ್ಟುಕೊಂಡು ತಾತ್ವಿಕವಾಗಿ ವಿಷಯ ಮಂಡನೆ ಮಾಡುವುದರ ಮೂಲಕ ಯಾವುದೇ ಸತ್ಯವನ್ನು, ವಾಸ್ತವವನ್ನು ಲೇಖಕರು ಅಭಿವ್ಯಕ್ತಪಡಿಸಬಹುದು.

ಧಾರವಾಡ ಕಟ್ಟೆಯ ಎಲ್ಲಾ ಆಲೋಚನೆಗಳಿಗೆ, ಕಾರ್ಯಕ್ರಮಗಳಿಗೆ, ಉಪನ್ಯಾಸಗಳಿಗೆ, ಪ್ರಶಸ್ತಿ-ಪುರಸ್ಕಾರಗಳಿಗೆ ಮತ್ತು ಪ್ರಕಟಣೆಗಳಿಗೆ ಕನ್ನಡದ ಮನಸ್ಸುಗಳಿಗೆ ಹಾರ್ದಿಕ ಮತ್ತಿ ಪ್ರೀತಿಯ ಸ್ವಾಗತ.

ನಮಸ್ಕಾರ.


ಇಂತಿ,

ಶ್ರೀಮತಿ ಸುರೇಖಾ ಡೋಣೂರ

Notification

ಲೋಕೋಕ್ತಿ

ಸಾಧನೆ ತ್ಯಾಗ ಮತ್ತು ಕಠಿಣ ಪರಿಶ್ರಮ ಬೇಡುತ್ತದೆ. ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಕಾಡಿಗೆ ಹೋಗಿ, ಮಳೆ-ಗಾಳಿ ಲೆಕ್ಕಿಸದೆ, ಉಪವಾಸವಿದ್ದು, ಗಡ್ಡೆ-ಗೆಣಸು ತಿಂದು, ಕ್ರೂರ ಪ್ರಾಣಿಗಳ ಉಪಟಳ ಸಹಿಸಿಕೊಂಡು, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ದೀರ್ಘ ತಪಸ್ಸು ಮಾಡಿ ಜ್ಞಾನ ಸಂಪಾದಿಸುತ್ತಿದ್ದರು. ಇತ್ತೀಚೆಗೆ ಸಾಧಕರ ಸಂಖ್ಯೆ ಕಡಿಮೆ ಆಗುತ್ತಿದೆ. ಏಕೆಂದರೆ ಜೀವನದ ಕನಿಷ್ಠ ಸುಖವನ್ನೂ ತ್ಯಾಗ ಮಾಡಲು ನಾವು ಸಿದ್ಧರಿಲ್ಲ. ಹೀಗಿರುವಾಗ ದೊಡ್ಡ ಶಕ್ತಿ ನಮ್ಮ ಕೈವಶವಾಗಲು ಸಾಧ್ಯವೆ?
ತ್ಯಾಗದಲ್ಲಿ ಸುಖವಿದೆ, ಸಾಧನೆಯಲ್ಲಿ ಅರ್ಥವಿದೆ. ಎರಡನ್ನೂ ಮೈಗೂಡಿಸಿಕೊಂಡಾಗ ಸಾಧಕರಾಗುತ್ತೇವೆ. ತ್ಯಾಗ ಮಾಡದ, ಸಾಧನೆ ಮಾಡಿ ಸಾಧಕನಾಗದ ವ್ಯಕ್ತಿಯ ಬದುಕು ಅಪೂರ್ಣ ಮತ್ತು ಅರ್ಥಹೀನ

ಮೂರು ದಿನಗಳ ರಾಷ್ಟ್ರೀಯ
ಕಾರ್ಯಾಗಾರ

ಭಾರತೀಯ ಸಾಹಿತ್ಯ ಸಂಶೋಧನೆಯಲ್ಲಿ ಹೊಸ ಒಲವುಗಳು ಮತ್ತು ಸಾಧ್ಯತೆಗಳು ವಿಷಯದ ಮೇಲೆ ಧಾರವಾಡ ಕಟ್ಟೆ, ಧಾರವಾಡ, ದ. ರಾ . ಬೇಂದ್ರೆ ರಾಷ್ಟ್ರೀಯ ಟ್ರಸ್ಟ್, ಧಾರವಾಡ ಸಹಯೋಗದೊಂದಿಗೆ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿದೆ.

~K
Participants Till Date
+
Virtual Events
+
Speakers Partnered

FAQs

Scroll to Top