ಕಲಿತ ಕಳ್ಳ

ನಿನಗಿಲ್ಲವಲ್ಲ ಒಂದೇ ಒಂದು ಮುಖ
ಒಳಗೊಂದಿದ್ದರೆ ಹೊರಗೆ ನೂರೊಂದು
ನಿನ್ನ ಮುಖದ ಗುರುತು ನನಗಿದೆಯೆ?
ಎಷ್ಟೊಂದು ಮುಖವಾಡಗಳು ಹೊತ್ತು ನಿಂತಿರುವೆ?

ಇಲ್ಲಿಗೆ ಬಂದು ಬಲ ಎನ್ನುವೆ, ಅಲ್ಲಿಗೆ ಹೋಗಿ
ಎಡವೆಂದು ಹೇಳಿ ಎಲ್ಲರನ್ನೂ ಯಾಮರಿಸುವೆ
ಎಡವೂ ಅಲ್ಲ ಬಲಲೂ ಅಲ್ಲ ತಟಸ್ಥ ಎನ್ನುವೆ
ಇಬ್ಬರಿಂದ ಎರಡು ಪಟ್ಟು ಕಬಳಿಸಿ ಢರಕಿ ಹೊಡೆಯುವೆ

ದ್ವೇಷವಿಲ್ಲ, ಮತ್ಸರವಿಲ್ಲ ಹಗೆತನವಂತೂ ಮೊದಲೆ ಇಲ್ಲ
ಎನ್ನುತ್ತಲೆ ದ್ವೇಷ- ಮತ್ಸರ ಹೊಟ್ಟೆಯಲ್ಲಿಟ್ಟುಕೊಂಡು ಬೀದಿ ಬೀದಿಯಲ್ಲಿ ಎಲ್ಲೆಂದರಲ್ಲಿ ಕಾರುವೆ ಮಹಾಪಂಡಿತನಂತೆ ತತ್ವಜ್ಞಾನಿಯಂತೆ ಕಣ್ಮುಚ್ಚಿ ಧ್ಯಾನಿಸುವೆ, ಅಳಿದು ತೂಗಿ ಮಾತನಾಡುವೆ
ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ತಿಳಿಯದೆ ಜಗಕ್ಕೆ?

ಅನ್ಯಾಯದ ತಕ್ಕಡಿಯಲ್ಲಿ ನ್ಯಾಯ ತೂಗುವೆ
ಅಧರ್ಮದದಲ್ಲಿ ನಡೆದು ಧರ್ಮ ಬೋಧಿಸುವೆ
ಅನೈತಿಕತೆಯ ದಾರಿಯಲಿ ನಿಂತು ನೈತಿಕತೆಯ
ಪಾಠ ಮಾಡುವೆ, ನಯ ನಾಜುಕಿನಿಂದ ಇರಿಯುವೆ

ಕಲಿತ ವಿದ್ಯ, ಸಂಪಾದಿಸಿದ ಅಕ್ಷರ, ಓದಿದ ಗ್ರಂಥ, ಆಡಿದ ಮಾತು, ಕಲಿತ, ಕಲಿಸಿದ ನೀತಿಪಾಠ
ಬುದ್ಧ-ಭಾವ ಶುದ್ಧ ಮಾಡಲಿಲ್ಲ! ಮನಸ್ಸು ಹಸನಗೊಳಿಸಲಿಲ್ಲ! ಎಂಥ ವಿಪರ್ಯಾಸ!

ದೇವತೆಯ ಮನಸ್ಸು ಎಂದುಕೊಂಡಿದ್ದೆ, ಸೈತಾನನ ಮನಸ್ಸು, ರಕ್ಕಸಿಯ ಮಿದುಳು ಭೂತಚೇಷ್ಟೆ ಎಂದು ತಿಳಿಯಲಿಲ್ಲ, ಜಾನ್ ಮಿಲ್ಟನ್ ಆಡುವ ಮಾತು
ಮೂಲೆ ಮೂಲೆಯಲ್ಲಿ ಎಬ್ಬಿಸುತ್ತಿವೆ ತರಂಗಗಳ-

The mind is its own place, and in itself can make a heaven of hell, a hell of heaven.

ಬಸವರಾಜ ಡೋಣೂರ

Leave a Comment

Your email address will not be published. Required fields are marked *

Scroll to Top