ಶ್ರೀ ಅರವಿಂದರು || ಡಾ. ರೋಹಿಣಾಕ್ಷ ಶಿರ್ಲಾಲು

ಶ್ರೀ ಅರವಿಂದರು || ಡಾ. ರೋಹಿಣಾಕ್ಷ ಶಿರ್ಲಾಲು

ಶ್ರೀ ಅರವಿಂದರು || ಡಾ. ರೋಹಿಣಾಕ್ಷ ಶಿರ್ಲಾಲು

by
109 109 people viewed this event.

ಕಾರ್ಯಕ್ರಮ ವರದಿ

  • ಭಾರತೀಯರಿಗೆ ಭಾರತವನ್ನು ಪರಿಚಯಿಸಿಕೊಟ್ಟ ಮಹಾ ತತ್ವಜ್ಞಾನಿ ಶ್ರೀ ಅರವಿಂದರು -ಡಾ. ರೋಹಿಣಾಕ್ಷ ಶಿರ್ಲಾಲು
  • ರಾಷ್ಟ್ರೀಯತೆ ಎನ್ನುವುದು ಅರವಿಂದರಿಗೆ ಗುರಿ ಅಥವಾ ರಾಜಕೀಯ ಧೈಯ ಮಾತ್ರವಾಗಿರದೆ ಅದೇ ಅವರ ಧರ್ಮವಾಗಿತ್ತು ಮತ್ತು ಬದುಕಾಗಿತ್ತು.- ಪ್ರೊ. ಬಸವರಾಜ ಡೋಣೂರ


ಕನ್ನಡದ ಅನೇಕ ಸಾಹಿತಿಗಳು ಅರವಿಂದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರಲ್ಲೊಬ್ಬರು ವಿ.ಕೃ.ಗೋಕಾಕ್, ಇವರು ತಮ್ಮ ಬರವಣಿಗೆಯಲ್ಲಿ ಅರವಿಂದರು ಹೇಗೆ ಜಗತ್ತನ್ನ ಪ್ರಭಾವಿಸಿದ್ದರು ಎಂಬುದರ ಕುರಿತು ಮಾತನಾಡಿದ್ದಾರೆ ಎಂದು ಡಾ. ರೋಹಿಣಾಕ್ಷ ಶಿರ್ಲಾಲು ಹೇಳಿದರು.
ಧಾರವಾಡ ಕಟ್ಟೆ ಆಯೋಜಿಸಿದ ಜಾಗತಿಕ ತತ್ವಜ್ಞಾನಿಗಳ ಉಪನ್ಯಾಸ ಮಾಲಿಕೆಯಲ್ಲಿ- ಅರವಿಂದರ ಕುರಿರು ಡಾ. ರೋಹಿಣಾಕ್ಷ ಶಿರ್ಲಾಲು ಅವರು ಮಾತನಾಡಿದರು.
ಶ್ರೀ ಅರವಿಂದರು ತಮ್ಮ ‘ಲೈಫ್ ಡಿವೈನ್’ ಪುಸ್ತಕದಲ್ಲಿ ಕಾಸ್ಮಾಲಜಿ ಮತ್ತು ಮೆಟಾಫಿಸಿಕ್ಸ್ ಕುರಿತು ವಿವರವಾಗಿ ಹೇಳಿದ್ದಾರೆ. ತಮ್ಮ ‘ಹೂಮನ್ ಸೈಕಲ್ ಗ್ರಂಥದಲ್ಲಿ ಸಮಾಜಶಾಸ್ತ್ರಕ್ಕೆ ಒಂದು ಹೊಸ ಮಾರ್ಗ ತೋರಿಸಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ವಿವರಗಳನ್ನು ವಿಶ್ಲೇಷಿಸಿ ಅದರಲ್ಲಿ ಆಧ್ಯಾತ್ಮಿಕ ದೃಷ್ಟಿಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಇದೇ ವಿಚಾರವನ್ನು ವಿಶ್ಲೇಷಿಸುತ್ತ ‘ఐడియలో ఆభా జ్యెమనో యూనిటి ఎంట గ్రంథదల్లి అరవిందరు. ಅಂತರಾಷ್ಟ್ರೀಯ ರಾಜಕಾರಣದ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ’ ಸಿಂಥಸಿಸ್ ಆಫ್ ಯೋಗ’ ಕೃತಿಯಲ್ಲಿ ಯೋಗ ಮಾರ್ಗವು ನಮ್ಮ ಪ್ರಜ್ಞೆಯ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ‘ಪುರಾತನ ಮಹಾಕಾವ್ಯವಾದ ಮಹಾಭಾರತವನ್ನು ಬರೆದ ತರುವಾಯ ನಾವು ಅರವಿಂದನ ನೆನೆಯಬೇಕು, ಈ ಹಿಂದೆ ವ್ಯಾಸರು ಮಾಡಿದ ಕಾರ್ಯವನ್ನೇ ಇಂದಿನ ಯುಗದಲ್ಲಿ ಅರವಿಂದರು ಮಾಡಿದ್ದಾರೆ’ ಎಂದು ವಿ. ಕೃ. ಗೋಕಾಕ್ ಅವರು ಹೇಳಿದ್ದಾರೆ. ಅರವಿಂದ ಕಂದ ನಾವು ನೆನಪು ಮಾಡಿಕೊಂಡಾಗ ಅವರ ಬದುಕಿನ ಎರಡು ಹಂತಗಳನ್ನು ನಾವು ಗಮನಿಸಬೇಕು, ಒಂದು ಅವರ ಬಾಲ್ಯದಿಂದ ಆರಂಭವಾದ ಸ್ವತಂತ್ರ ಹೋರಾಟದ ಭಾಗವಾಗಿ ಕ್ರಾಂತಿಕಾರಿಯಾಗಿ ತೊಡಗಿಸಿಕೊಂಡ ಒಂದು ಜೀವನದ ಭಾಗ, ಇನ್ನೊಂದು ಸಂಪೂರ್ಣವಾಗಿ ಆಧ್ಯಾತ್ಮಿಕ ಸಾಧನೆಗಾಗಿ ತನ್ನನ್ನೇ ಮುಡುಪಾಗಿಟ್ಟುಕೊಂಡಂತಹ ಅರವಿಂದರ ಜೀವನದ ಭಾಗವಾಗಿದೆ ಎಂದು ಅವರ ಇಡೀ ಬದುಕನ್ನ ಎರೆಡು ಭಾಗದಲ್ಲಿ ಗ್ರಹಿಸಲು ಸಾಧ್ಯವಿದೆ ಎಂದರು.
1872 ಆಗಸ್ಟ್ 15 ಅರವಿಂದರು ಹುಟ್ಟಿದರು, ಆಗ ಭಾರತ ಒಂದು ಅರ್ಥದಲ್ಲಿ ಗುಲಾಮಿತನದಲ್ಲಿ ಇದ್ದ ಕಾಲ. ನಮ್ಮ ಮಾನಸಿಕತೆಯು ಅಂತದ್ದೇ ಗುಲಾಮಿತನಕ್ಕೆ ಒಗ್ಗಿಕೊಂಡಿದ್ದ ಕಾಲ, ಜಗತ್ತಿನ ಮುಂದೆ ಭಾರತ ಎನ್ನುವುದು ಒಂದು ಗುಲಾಮರ ದೇಶ ಎನ್ನುವ ಭಾವನೆ ಮಾತ್ರವಲ್ಲ, ಸ್ವತಃ ಭಾರತೀಯರು ಕೂಡ ತಮ್ಮನ್ನು ತಾವು ಹೀಗೆ ಭಾವಿಸಿಕೊಂಡಿದ್ದ ಕಾಲಘಟ್ಟ ಭಾರತೀಯರೇ ತಮ್ಮ ಧರ್ಮ, ನಾಗರಿಕತೆ, ಪರಂಪರೆಯ ಬಗ್ಗೆ ಕೀಳರಿಮೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಪಶ್ಚಿಮದ ಜೀವನ ಶೈಲಿಯನ್ನು ಮಾದರಿಯಾಗಿ ಒಪ್ಪಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಅರವಿಂದರ ಜನನವಾಯಿತು.
ಅರವಿಂದರ ಇಡೀ ಜೀವನವನ್ನ ಗಮನಿಸಿದರೆ ಒಬ್ಬ ಅರವಿಂದರು, ಒಬ್ಬ ಭಾರತೀಯರಿಗೆ ಭಾರತವನ್ನು ಹೇಗೆ ಪರಿಚಯಿಸಿ ಕೊಟ್ಟರು ಎನ್ನುವುದು ಅರ್ಥವಾಗುತ್ತದೆ. ಅರವಿಂದರು ಜನಿಸಿದ ಮತ್ತು ಬೆಳೆದ ವಾತಾವರಣ ಸಂಪೂರ್ಣ ಆಂಗ್ಲಮಯ ವಾತಾವರಣ. ಇವರ ಬಾಲ್ಯ ಭಾರತದಿಂದ, ಭಾರತೀಯ ವಾತಾವರಣದಿಂದ ಸಂಪೂರ್ಣವಾಗಿ ದೂರವಿದ್ದ ಸ್ಥಿತಿ. ಸ್ವತಃ ಅವರ ತಂದೆಗೆ ಭಾರತೀಯತೆಯ ಕುರಿತು ಸಂದರ್ಭದಲ್ಲಿ ನಕಾರಾತ್ಮಕ ಭಾವನೆಗಳು ಇದ್ದವು. ಈ ಕಾರಣಕ್ಕಾಗಿ ತನ್ನ ಮಗ ಅಂಥ ಒಂದು ವಾತಾವರಣದಲ್ಲಿ ಬೆಳೆಯಬಾರದು ಎಂದು ಅವರನ್ನು ವಿದ್ಯಾಭ್ಯಾಸ ಮಾಡಲು ದೂರ ಕಳುಹಿಸಿದರು. ಭಾರತೀಯರಲ್ಲಿನ ದಾಸ್ಯ ಪ್ರವೃತ್ತಿ, ಗುಲಾಮಿತನ, ರಾಜಕೀಯ ದಾಸಕ್ಕೆ ಏನು ಕಾರಣ ಎನ್ನುವುದರ ಕುರಿತು ಚಿಂತನೆಯಲ್ಲಿ ತೊಡಗುತ್ತಾರೆ, ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಬಿಡುಗಡೆಗೊಳಿಸಬೇಕು ಎಂದು ಪಣ ತೊಟ್ಟು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದರು.

ಭಾರತೀಯರಲ್ಲಿನ ದಾಸ್ಯತನಕ್ಕೆ ಅವರ ಹೇಡಿತನವೆ ಕಾರಣ ಎಂದು ಅರವಿಂದರು ಕಂಡುಕೊಂಡರು. ಈ ಕಾರಣಕ್ಕಾಗಿ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಹೋರಾಟಕ್ಕೆ ಇಳಿಯಬೇಕು, ಬಲಿದಾನ, ರಕ್ತತರ್ಪಣದಿಂದ ಮಾತ್ರ ಸಾಧ್ಯವೆಂಬುದು ಅವರ ಬಲವಾದ ನಂಬಿಕೆಯಾಗಿತ್ತು ಕ್ರಾಂತಿಕಾರಿಗಳ ಕರ್ಮಭೂಮಿ ಎಂದೇ ಹೆಸರುವಾಸಿಯಾದ ಬಂಗಾಳದಲ್ಲಿ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಕ್ರಾಂತಿಕಾರಿಗಳಿಗೆ ಒಂದು ನಾಯಕತ್ವವನ್ನು ಕೊಟ್ಟು ಕ್ರಾಂತಿಕಾರಿಗಳ ನಡುವೆ ಸಮಾನತೆಯನ್ನು ರೂಪಿಸಿ ಬ್ರಿಟಿಷರ ಈ ನಿಲುವಿನ ವಿರುದ್ಧ ಒಂದು ತೀವ್ರ ಪ್ರಮಾಣದ ಹೋರಾಟಕ್ಕೆ ಅರವಿಂದರೇ ಮೂಲ ಕಾರಣ.
ಅರವಿಂದರು ಎಂದರೆ ಒಬ್ಬ ಯೋಗಿಯು ಹೌದು, ಒಬ್ಬ ಯೋಧನು ಹೌದು. ಅವರ ಆಧ್ಯಾತ್ಮಿಕವಾದ ಮಾರ್ಗ ಸಾಧನೆ ಕ್ಷಣಾರ್ಧದಲ್ಲಿ ಹುಟ್ಟಿದ್ದಲ್ಲ. ಬಹಳ ಆಳವಾದ ವಿವೇಚನೆಯಿಂದ ಕೂಡಿ, ಆಯ್ಕೆ ಮಾಡಿದ ಒಂದು ದಾರಿ, ಸ್ವಾತಂತ್ರ್ಯದ ಹೋರಾಟಕ್ಕೆ ಭಾರತದ ಬಿಡುಗಡೆಗೆ ತಪಸ್ವಿಯ ಆತ್ಮಶಕ್ತಿಯು ಬೇಕು, ಕ್ರಾಂತಿಕಾರಿಯ ಖಡ್ಗದ ಶಕ್ತಿಯು ಬೇಕು ಎನ್ನುವುದನ್ನು ಸ್ಪಷ್ಟಪಡಿಸಿದ್ದು ಅರವಿಂದರು. ಅವರು ಅನುಸರಿಸದ ಮಾರ್ಗದಿಂದ ಅನೇಕರು ಪ್ರಭಾವಿತರಾಗಿ ಹೋರಾಟದಲ್ಲಿ ಧುಮುಕಿದರು.
ಅರವಿಂದರು ಹೆಚ್ಚು ಅರ್ಥಗವಾಗುವುದು ಅವರ ಬರಹದ ಮೂಲಕ, ಅವರ ಬರಹ ಬ್ರಿಟಿಷರ ನಿದ್ದೆ ಕೆಡಿಸಿತ್ತು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ನಿರ್ಭಿತಿಯಿಂದ ಬರೆಯುತ್ತಿದ್ದರು. ಅರವಿಂದರು ಬರೆದ ಅನೇಕ ಸಂದರ್ಭದಲ್ಲಿ ಬರೆದ ಲೇಖನಗಳು ಕೃತಿಗಳು ಉಂಟು ಮಾಡಿದ ಪ್ರಭಾವ ಅವುಗಳು ಹುಟ್ಟು ಹಾಕಿದ ಚರ್ಚೆ ಇವತ್ತಿಗೂ ಪ್ರಸ್ತುತ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿ ಭಾರತೀಯ ಧರ್ಮ, ನಂಬಿಕೆ, ಸಂಪ್ರದಾಯ, ಆಚಾರ ಹಾಗೂ ವಿಚಾರಗಳೆಲ್ಲವೂ ಮಸುಕಾಗಿದ್ದವು. ಅವುಗಳನ್ನ ಅರವಿಂದರು ಮತ್ತೊಮ್ಮೆ ತಿಕ್ಕಿ ಮೇಲೆ ಅಂಟಿದ್ದ ತುಕ್ಕನ್ನು ತೊರೆದು ಅದರ ನಿಜವಾದ ಹೊಳಪನ್ನ ಪರಿಚಯಿಸಿಕೊಟ್ಟರು.
ಅರವಿಂದರು ಪಶ್ಚಿಮದಿಂದ ಬಿಡಿಸಿಕೊಳ್ಳಬೇಕಾದ ಅಗತ್ಯವನ್ನು ಕೂಡ ಅವರು ಗುರುತಿಸಿ ಹೇಳುತ್ತಾರೆ. ಭಾರತದ ಮೇಲೆ ಶತಮಾನಗಳ ಕಾಲ ಪರಕೀಯರ ದಾಳಿ, ಆಳ್ವಿಕೆಗೆ ಒಳಪಟ್ಟ ಇತಿಹಾಸ ಇದ್ದರೂ ಕೂಡ ಭಾರತ ತನ್ನ ಜೀವಂತಿಕೆಯನ್ನ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು ಭಾರತದ ಮಣ್ಣಲ್ಲಿ ಅಡಗಿದ ಆಧ್ಯಾತ್ಮಿಕ ಶಕ್ತಿಯಿಂದ, ಅಂಥ ಶಕ್ತಿಯನ್ನು ಅರವಿಂದರು ಹೊಂದಿದ್ದರು, ಮನುಕುಲದ ಉದ್ಗಾರ ಮನುಕುಲದ ವಿಕಾಸ ಭಾರತದ ಮೂಲಕವೇ ಸಾಧ್ಯವಿದೆ. ಲೋಕಕ್ಕೆ ಬೇಕಾದ ಬೆಳಕನ್ನು ನೀಡುವಂಥ ಶಕ್ತಿ ಭಾರತಕ್ಕಿದೆ ಎನ್ನುವ ಸ್ಪಷ್ಟ ಕಲ್ಪನೆ ಅರವಿಂದರಿಗಿತ್ತು. ಭಾರತವೆಂದರೆ ವಿಶ್ವ ರಾಷ್ಟ್ರಗಳ ಗುರು. ಮಾನವನ ಆತ್ಮಕ್ಕೆ ಕವಿದಂತ ವ್ಯಾಧಿಗಳನ್ನೂ ಪರಿಹರಿಸುವ ಧನ್ವಂತರಿ, ಭಾರತವು ಜಗತ್ತಿನ ಜೀವನವನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಮಾನವೀಯತೆಗಾಗಿ ಭಾರತ ಮಾಡಬೇಕಾದ ಕಾರ್ಯವನ್ನು ಇನ್ಯಾವುದೇ ದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಧಾರವಾಡ ಕಟ್ಟೆಯ ಗೌರಾಧ್ಯಕ್ಷರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ ಅರವಿಂದರ ವ್ಯಕ್ತಿತ್ವಕ್ಕೆ ಅನೇಕ ಆಯಾಮಗಳಿವೆ. ಅವರು ಯೋಗಿಯಾಗಿದ್ದರು, ಸಂತರಾಗಿದ್ದರು, ಪ್ರಖರ ರಾಷ್ಟ್ರವಾದಿಯಾಗಿದ್ದರು, ನಾಟಕಕಾರ, ಕವಿ, ಅನುವಾದಕ ಹಾಗೂ ಚಿಂತಕರಾಗಿದ್ದರು, ಆಧುನಿಕ ಭಾರತ ಸೃಷ್ಟಿ ಮಾಡಿದ ಅದ್ಭುತವಾದ ಪ್ರತಿಭೆ ಶ್ರೀ ಅರವಿಂದರದು. ಭಾರತದ ಸಂಗ್ರಾಮದಲ್ಲಿ ಪಾಲ್ಗೊಂಡರು, ದೇಶದ ಸ್ವಾತಂತ್ರ್ಯದ ಸಲುವಾಗಿ ಕಾಂಗ್ರೆಸ್ ಅಳವಡಿಸಿದ ಅನೇಕ ಕಾರ್ಯಕ್ರಮಗಳ ಬಗೆಗೆ ಅವರಿಗೆ ಅಸಮಾಧಾನವಿತ್ತು. ಆ ಕಾರಣಕ್ಕಾಗಿ ಅವರು ರಾಜಕೀಯ ಸಹವಾಸವನ್ನು ಬಿಟ್ಟು ತಮ್ಮೆಲ್ಲ ಶಕ್ತಿ ಸಾಮರ್ಥ್ಯವನ್ನು ಅಧ್ಯಾತ್ಮ ಬರಹ, ಯೋಗದಲ್ಲಿ ಬಳಸಿಕೊಂಡ ಅಪರೂಪದ ವ್ಯಕ್ತಿತ್ವ ಅವರದು.
ಅವರಿಂದರ ವಿಚಾರಗಳು ಭಾರತೀಯರನ್ನು ಚಿಂತನೆಗೆ ದೂಡುತ್ತವೆ. ಅವರಲ್ಲಿ ತೀವ್ರವಾದ ರಾಷ್ಟ್ರೀಯ ಪ್ರಜ್ಞೆಯಿತ್ತು, ರಾಷ್ಟ್ರೀಯತೆ ಎನ್ನುವುದು ಅರವಿಂದರಿಗೆ ಗುರಿ ಅಥವಾ ಧೈಯ ಮಾತ್ರವಾಗಿರದೆ ಅದೇ ಅವರ ಧರ್ಮವಾಗಿತ್ತು ಮತ್ತು ಬದುಕಾಗಿತ್ತು ಹೀಗೆ ಅವರು ದೇಶವನ್ನು ಪ್ರೀತಿಸಿದರು ಮತ್ತು ಜನರನ್ನ ಪ್ರೀತಿಸಲು ಪ್ರೇರಪಿಸಿ ಪ್ರೋತ್ಸಾಹಿಸಿದರು..
ದೇಶ ಎಂದರೇನು? ರಾಷ್ಟ್ರೀಯತೆ ಎಂದರೇನು? ರಾಷ್ಟ್ರಪ್ರೇಮ ಎಂದರೇನು? ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ರಾಷ್ಟ್ರಧ್ವಜದ ಬಗೆಗೆ ಗೌರವವಿಲ್ಲ, ರಾಷ್ಟ್ರಗೀತೆಯ ಬಗೆಗೆ ಗೌರವವಿಲ್ಲ ಎಂದಾದ ಮೇಲೆ ನಾವು ರಾಷ್ಟ್ರವನ್ನು ಪ್ರೀತಿಸಲು ಹೇಗೆ ಸಾಧ್ಯ? ಇವು ರಾಷ್ಟ್ರದ ಸಂಕೇತಗಳು, ಒಂದು ರಾಷ್ಟ್ರಕ್ಕೆ ತನ್ನದೇ ಆದ ಚರಿತ್ತೆ ಪರಂಪ ಇರುತ್ತದೆ, ಹಾಗಾಗಿ ನಾವು ನಮ್ಮ ರಾಷ್ಟ್ರ ಭಾರತವನ್ನು ಪ್ರೀತಿಸುತ್ತೇವೆ ಎಂದರೆ ಭಾರತದ ಪರಂಪರೆಯನ್ನು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಇತಿಹಾಸವನ್ನು ಕಲೆಯನ್ನು ಸಾಹಿತ್ಯವನ್ನು ಪ್ರೀತಿಸಬೇಕು. ಸನಾತನ ಧರ್ಮವೆಂದರೆ ಅದು ಭಾರತೀಯ ಧರ್ಮ, ಅದರ ಬಗೆಗೆ ಇಲ್ಲಸಲ್ಲದ ಮಾತುಗಳನ್ನ ಆಡುವುದು ಸರಿಯಾದ ನಡವಳಿಕೆ ಅಲ್ಲ. ಅರವಿಂದರು ನಮಗೆ ಶುದ್ಧವಾದ ದೇಶಪ್ರೇಮ, ರಾಷ್ಟ್ರೀಯತೆಯನ್ನು ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ. ಅದನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು, ಇಲ್ಲದಿದ್ದರೆ ದೇಶ ಅಖಂಡವಾಗಿ, ಸುಸ್ಥಿರವಾಗಿ ಉಳಿಯುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕಟಗಿಹಳ್ಳಿಮಠ, ಮುಕುಂದ ಲಮಾಣಿ, ನಾಗರಾಜ, ರಾಜಶ್ರೀ, ಬಸವನಗೌಡ ಸಂಗಣ್ಣಗೌಡ ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ದಾನರಡ್ಡಿ ನಿರೂಪಿಸಿದರು. ಸಿದ್ದಣ್ಣ ವಾಡೇದ, ಪ್ರಕಾಶ್ ಬಾಳಿಕಾಯಿ, ಶಿವರಾಜ್ ಸಣಮನಿ, ಪ್ರತಿಭಾ ದಾನರಡ್ಡಿ, ಬಸಯ್ಯಸ್ವಾಮಿ ಹಾಗೂ ಸಂಗಮೇಶ ತಾಂತ್ರಿಕ ನೆರವು ನೀಡಿದರು

Event registration closed.
 

Date And Time

11-11-2023 @ 06:00 PM to
11-11-2023 @ 09:00 PM
 

Registration End Date

11-11-2023
 

Location

Online event
 

Event Types

 
Watch video
 

Share With Friends

Scroll to Top