ಭೌತಶಾಸ್ತ್ರ ಮತ್ತು ಸಾಹಿತ್ಯ || ಡಾ. ರಾಜೀವ್ ಶೇಷಾ ಜೋಶಿ

ಭೌತಶಾಸ್ತ್ರ ಮತ್ತು ಸಾಹಿತ್ಯ || ಡಾ. ರಾಜೀವ್ ಶೇಷಾ ಜೋಶಿ

ಭೌತಶಾಸ್ತ್ರ ಮತ್ತು ಸಾಹಿತ್ಯ || ಡಾ. ರಾಜೀವ್ ಶೇಷಾ ಜೋಶಿ

by
94 94 people viewed this event.

ತಾತ್ವಿಕ ಚಿಂತನೆಗಳು ಮಾತೃ ಸಾಹಿತ್ಯವಾದರೆ, ವಿಜ್ಞಾನವು ಬಂಧಿತ ಸಾಹಿತ್ಯವಾಗಿರುತ್ತದೆ: ಡಾ. ರಾಜೀವ್ ಜೋಶಿ

ವಿಜ್ಞಾನ ಮತ್ತು ಸಾಹಿತ್ಯ ಎರಡರ ಗುರಿ ಸತ್ಯದರ್ಶನವೇ ಆಗಿದೆ: ಪ್ರೊ. ಬಸವರಾಜ ಡೋಣೂರ

ಜ್ಞಾನ ಮತ್ತು ಸಾಹಿತ್ಯದ ಮಧ್ಯೆ ಅಂತರವೇನೂ ಇಲ್ಲ. ಎರಡರ ಉದ್ದೇಶ ಸತ್ಯ ಶೋಧವೇ ಆಗಿದೆ. ಆದರೆ ಸಾಹಿತಿಗೆ ಇರುವಷ್ಟು ಮುಕ್ತತೆ ವಿಜ್ಞಾನಿಗೆ ಇರುವುದಿಲ್ಲ, ಸಾಹಿತ್ಯದ ಮೂಲಕ ವಿಜ್ಞಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಸ್ವಲ್ಪ ಬಂಧಿತನಾಗಿರುತ್ತಾನೆ. ತಾತ್ವಿಕ ಚಿಂತನೆಗಳ ಮಾತೃ ಸಾಹಿತ್ಯವಾದರೆ, ವಿಜ್ಞಾನ ಬಂಧಿತ ಸಾಹಿತ್ಯವಾಗಿರುತ್ತದೆ. ಸಾಹಿತ್ಯ ವೈಶ್ವಿಕವಾದರೆ, ವಿಜ್ಞಾನ ಅದರ ಭಾಗವಾಗಿದೆ ಎಂದು ಡಾ. ರಾಜೀವ್ ಜೋಶಿ ಹೇಳಿದರು.

ಧಾರವಾಡ ಕಟ್ಟೆಯು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜೋಶಿ ಅವರು ಭೌತಶಾಸ್ತ್ರ ಮತ್ತು ವಿಜ್ಞಾನ ಎನ್ನುವ ವಿಷಯದ ಕುರಿತು ಮಾತನಾಡಿದರು.

ವಸ್ತು ಶೂನ್ಯವಾದದ್ದು ಸಾಹಿತ್ಯವಾಗಲಾರದು. ಸಾಹಿತ್ಯ ಆವರಣ ಹಾಗೂ ತತ್ವಾಧಾರವನ್ನು ಹೊಂದಿರುತ್ತದೆ. ದಕ್ಕಿಸಿಕೊಳ್ಳುವ ಸತ್ವಹೊಂದಿದ ಸಾಹಿತ್ಯ ಮಾತ್ರ ಸಮಾಜದಲ್ಲಿ ನೆಲೆ ನಿಲ್ಲುತ್ತದೆ. ವಸ್ತು ಹಾಗೂ ಪಾತ್ರಗಳ ನಡುವಿನ ಸಂವಾದದ ಮೂಲಕ ಸಾಹಿತ್ಯದ ವಿವಿಧ ರೂಪಗಳು ರಚಿಸಲ್ಪಡುತ್ತವೆ. ಪಾತ್ರಗಳ ನಡುವಿನ ಪಾಕ ಪ್ರಕಟವಾದಾಗ ಸಾಹಿತ್ಯ ನಿರ್ಮಾಣವಾಗುತ್ತದೆ. ಅದುವೇ ಸಾಹಿತ್ಯದ ಮೊದಲನೆಯ ಹಂತ. ಪ್ರಯತ್ನ ಪ್ರಕಟ, ಪರಿಗ್ರಹ ಪ್ರಕಟ ಹಾಗೂ ತತ್ವ ಪ್ರದುರ್ಭಾವ ಪ್ರಕಟ ಇವುಗಳು ಸಾಹಿತ್ಯದ ನಂತರದ ಹಂತಗಳಾಗಿವೆ. ಅತಿ ಎತ್ತರದಲ್ಲಿ ಇರುವ ಸಾಹಿತ್ಯಕ ಆಭರಣವೇ ಶುದ್ಧ ತತ್ವದ ತಾತ್ವಿಕ ಚಿಂತನೆಗಳು. ಅದಕ್ಕೆ ಶಬ್ದ ಮತ್ತು ಅರ್ಥಗಳ ಬಂಧನ ಬೇಕಾಗಿರುವುದಿಲ್ಲ ಅದೊಂದು ವೈಶ್ವಿಕ ಸಾಹಿತ್ಯವಾಗಿರುತ್ತದೆ.

ವಿಜ್ಞಾನದ ಮೂಲ ಸ್ವರೂಪವೇ ಭೌತಶಾಸ್ತ್ರ. ಯಾವುದೇ ಒಂದು ವೈಜ್ಞಾನಿಕ ಚಿಂತನೆ ಪ್ರಾರಂಭವಾಗುವುದು ವೀಕ್ಷಣೆಯಿಂದ. ಅದರಿಂದ ಹುಟ್ಟಿಕೊಳ್ಳುವುದೇ ತತ್ವ ಚಿಂತನೆಗಳು ಹಾಗೂ ಪರಿಕಲ್ಪನೆಗಳು. ವೀಕ್ಷಣೆಗಳ ನಡುವಿನ ಸಂಬಂಧ ನಿರ್ಮಾಣ ಮಾಡಲು ಸಲಕರಣೆಯಾಗಿ ತರ್ಕ ಬಳಕೆಯಾಗುತ್ತದೆ. ಕಲ್ಪನೆಗಳು, ಊಹೆಗಳ ಮೂಲಕವೇ ಭೌತಶಾಸ್ತ್ರದಚಿಂತನೆಗಳು, ತತ್ವಗಳು ಹುಟ್ಟಲ್ಪಡುತ್ತವೆ.

ಭೌತಶಾಸ್ತ್ರವು ಹಲವಾರು ಸಾಹಿತ್ಯಿಕ ತತ್ವಾಧಾರಗಳನ್ನು ಬದಲಾಯಿಸಿವೆ. ಅದಕ್ಕೆ ಪೂರಕವಾದ ಕೆಲವು ಸಿದ್ಧಾಂತಗಳಲ್ಲಿ; ರೆನ್ ಡೆಕಾರ್ಟ್ ನ ಪ್ರಭಾವ ಸಿದ್ಧಾಂತವೂ ಒಂದು ಅದು ‘ಒಂದು ಪಾತ್ರ ಇನ್ನೊಂದು ಪಾತ್ರವನ್ನು ಬದಲಾಯಿಸಬೇಕೆಂದರೆ ಭಾವನೆಗಳ ಸಂವಹನ ಆಗಬೇಕು’ ಎನ್ನುವ ತಾತ್ವಿಕ ಚಿಂತನೆಯನ್ನು ಒಳಗೊಂಡಿದೆ. ಐಸಾಕ್ ನ್ಯೂಟನ್, ಬಲದ ಪ್ರಯೋಗ, ಪಾತ್ರ ಪ್ರತಿನಿಧ್ಯತೆಯ ನಿರ್ಮಾಣ, ಚಲನೆಯ ಪರಿಮಾಣದ ಪ್ರತಿನಿಧ್ಯತೆಯ ಕುರಿತು ತನ್ನ ಪ್ರಾತಿನಿಧ್ಯತಾ ಸಿದ್ಧಾಂತದಲ್ಲಿ ತನ್ನ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾನೆ.

ಹಲವು ರೀತಿಯ ಆಯಾಮಗಳು ಸೇರಿಯೇ ಒಂದು ಆಯಾಮವಾಗುತ್ತದೆ ಎನ್ನುವ ವಾದವನ್ನು ಬೋಲ್ಟ್ಸ್ ಮನ್ ತನ್ನ ವಿಭಾಗ ಸಿದ್ಧಾಂತದ ಮೂಲಕ ವ್ಯಕ್ತಪಡಿಸುತ್ತಾನೆ. ಎಲ್ಲ ಚಲನೆಗಳೂ ಸಮಾನವಾಗಿಯೇ ವಿಭಾಗವಾಗಿರುತ್ತವೆ. ಈ ಸಿದ್ಧಾಂತ ಸಾಹಿತ್ಯದಲ್ಲಿ ಪ್ರಯೋಗವಾಗಿರುವುದು ಬಹಳ ವಿರಳವಾದರೂ, ಸಾಹಿತ್ಯದಲ್ಲಿನ ಪಾತ್ರಗಳ ಭಾವನೆಗಳು ವ್ಯಕ್ತವಾಗುವುದು ಒಂದು ಆಯಾಮವೇ ಆಗಿರುತ್ತದೆ ಎನ್ನುವುದು ಅವನ ವಾದವಾಗಿದೆ.

ಕ್ಷೇತ್ರ ಸಿದ್ಧಾಂತ ಭೌತಶಾಸ್ತ್ರದ ಮತ್ತೊಂದು ಮಹತ್ವದ ತತ್ವ ಸಿದ್ಧಾಂತವಾಗಿದೆ. ಕ್ಲರ್ಕ್ ಮ್ಯಾಕ್ಸ್ವ ಲ್ ನು ಯಾವುದೇ ಒಂದು ವಸ್ತು ಇನ್ನೊಂದು ವಸ್ತುವನ್ನು ಬದಲಾಯಿಸಲು ಯಾವುದೇ ಸಂವಹನ ಇಲ್ಲವಾದಲ್ಲಿ ಅಲ್ಲಿ ಒಂದು ಕ್ಷೇತವಿರುತ್ತದೆ. ಅದು ವಿಶ್ವವ್ಯಾಪಿಯಾಗಿರುತ್ತದೆ. ಸಾರ್ವತ್ರಿಕತೆಯನ್ನು ಹೊಂದಿದ ಅದಕ್ಕೆ ಎಲ್ಲವನ್ನು ಬದಲಾಯಿಸುವ ಶಕ್ತಿ ಇರುತ್ತದೆ.
ವಿಜ್ಞಾನ ಮತ್ತು ಸಾಹಿತ್ಯದ ನಡುವಿನ ಸಂಬಂಧ ವ್ಯಾಖ್ಯೆಯ ವ್ಯಾಖ್ಯೆದ ಮೂಲಕ ನಡೆಯುತ್ತಿರುತ್ತದೆ. ಜ್ಞಾನ ಸಾಹಿತ್ಯವನ್ನು ನಿರ್ಮಾಣ ಮಾಡಲು ಜೀವ ಮತ್ತು ಆಯಾಮಗಳೆರಡೂ ಮುಖ್ಯವಾಗುತ್ತವೆ ಎಂದು ರಾಜೀವ್ ಜೋಶಿ ಹೇಳಿದರು.

ಧಾರವಾಡ ಕಟ್ಟೆಯ ಗೌರವಾಧ್ಯಕ್ಷರಾದ ಪ್ರೊ. ಬಸವರಾಜ ಡೋಣೂರ ಮಾತನಾಡಿ ‘ಬಿಗ್ ಬ್ಯಾಂಕ್ ಸಿದ್ಧಾಂತದ ಕುರಿತು’ ಹನ್ನೆರಡನೆಯ ಶತಮಾನದಲ್ಲಿಯೇ ಕನ್ನಡದಲ್ಲಿ ವಚನಕಾರರು ಬಹಳ ವ್ಯಾಪಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ಜೀವನದಲ್ಲಿ ಆಸೆ, ಕನಸು ಇರದವನು ವಿಜ್ಞಾನಿಯೂ ಆಗಲಾರ, ಸಾಹಿತಿಯೂ ಆಗಲಾರ. ಅವೆರಡರ ಉದ್ದೇಶ ಜೀವನದ ಜೀವನಾರಾಧನೆ ಮತ್ತು ಸತ್ಯ ದರ್ಶನವಾಗಿದೆ. ಕಲ್ಪನೆ ಎನ್ನುವುದು ಕೂಡ ಒಂದು ವಸ್ತಾವೇ ಆಗಿರುವುದರಿಂದ, ಕಲ್ಪನೆಯ ಮೂಲಕ ಹೊರಹೊಮ್ಮುವ ಸಾಹಿತ್ಯವೂ ವಾಸ್ತವವೇ ಆಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಗೀತಾ ವಸಂತ, ಡಾ. ಮಂಜುಳಾಕ್ಷಿ, ಡಾ. ಇಂದಿರಾ ಪಾಟೀಲ, ಡಾ. ಎಸ್.ಪಿ.ಗೌಡರ, ಡಾ. ಸಂಗನಗೌಡ, ಗೌರಮ್ಮ ಒಳಗೊಂಡಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರಡ್ಡಿ ನಿರೂಪಿಸಿದರು, ಡಾ. ಪ್ರಕಾಶ ಬಾಳಿಕಾಯಿ, ಶಿವರಾಜ ಸಣಮನಿ, ಸಿದ್ದಣ್ಣ ವಾಡೆದ, ಬಸಯ್ಯಸ್ವಾಮಿ, ಸಂಗಮೇಶ, ಪ್ರತಿಭಾ ದಾನರಡ್ಡಿ ತಾಂತ್ರಿಕ ನೆರವು ನೀಡಿದರು.

Event registration closed.
 

Date And Time

25-11-2023 @ 06:00 PM to
25-11-2023 @ 09:00 PM
 

Registration End Date

25-11-2023
 

Location

Online event
 

Event Types

 
Watch video
 

Share With Friends

Scroll to Top